ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

  •  “ರೈತರ ಕಣ”

ಪ್ರತಿ ಗ್ರಾಮದಲ್ಲಿ ರೈತರಿಗೆ ಅನುವಾಗುವಂತೆ “ರೈತರ ಕಣ”  ಎಂಬ ಮಹತ್ವಾಕಾಂಕ್ಷಿ ಘೋಷಣೆಯಡಿಯಲ್ಲಿ ಯೋಜನೆ ತಯಾರಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸರ್ಕಾರಿ/ಒಪ್ಪಿಗೆ ಪಡೆದ ಖಾಸಗಿ ಖಾಲಿ ಜಾಗಗಳನ್ನು ಆಯ್ಕೆ ಮಾಡಿಕೊಂಡು ಒಕ್ಕಣೆ ಕಣವನ್ನು ನಿರ್ಮಿಸುವುದು.

  • ಗ್ರಾಮ ಸಭೆಯ  ಅನುಮೋದನೆ ಪಡೆದು ನಿಯಮಾನುಸಾರ ಒಕ್ಕಣೆ ಕಣವನ್ನು ನಿರ್ಮಿಸುವುದು.
  • ಕೇಂದ್ರ ಸರ್ಕಾರವು ಹೊರಡಿಸಿರುವ ಕಾರ್ಯಾಚರಣೆಯ ಮಾರ್ಗಸೂಚಿಗಳು-2013, 4ನೇ ಆವೃತ್ತಿಯನ್ನು ಕಡ್ಡಾಯವಾಗಿ ಪಾಲನೆ ಮಾಡುವುದು.
  • ಈ ಯೋಜನೆಯ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಗ್ರಾಮ ಸಭಾ ಅನುಮೋದನೆ ನಂತರ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡು ಗ್ರಾಮ ಪಂಚಾಯತ್ ಗಳು ಅನುಷ್ಠಾನಗೊಳಿಸುವುದು.

  •  ಸಂಜೀವಿನಿ ಜೀವನೋಪಾಯ ಅಭಿಯಾನ

ಜನರು ತಮ್ಮ ಬದುಕಿಗೆ ಆಧಾರವಾದ ಅನ್ನದ ಗಳಿಕೆಗಾಗಿ ಹಲವು ಬಗೆಯ ಜೀವನೋಪಾಯ ಮಾರ್ಗಗಳನ್ನು ಅನುಸರಿಸುತ್ತಾರೆ. ಗುಣಮಟ್ಟದ ಜೀವನ ನಡೆಸಲು, ಕ್ರಿಯಾಶೀಲ ಬದುಕಿನತ್ತ ಹೆಜ್ಜೆಹಾಕಲು,ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸುತ್ತಿರುವಂತಹ ಅವಕಾಶ ವಂಚಿತರ, ವಿಕಲಚೇತನರ, ಭೂರಹಿತರ, ಕೂಲಿ ಕಾರ್ಮಿಕರ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಬಡತನ ರೇಖೆಗಿಂತ ಕೆಳಗಡೆ ಇರುವ ಜನರ ಶ್ರೇಯೋಭಿವೃದ್ಧಿಗಾಗಿ  “ಸಂಜೀವಿನಿ ಜೀವನೋಪಾಯ ಅಭಿಯಾನ” ಯೋಜನೆ.


 “ನಮ್ಮ ಹೊಲ-ನಮ್ಮ ದಾರಿ” ಕಾರ್ಯಕ್ರಮ


ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 100 ದಿನ ಕೂಲಿ ಯೋಜನೆಯಡಿ ರೈತರ ಹೊಲ ಗದ್ದೆ,ತೋಟ,ಜಮೀನುಗಳಿಗೆ ಸಂಪರ್ಕ ಕಲ್ಪಿಸಲು ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಯಲ್ಲಿ ಹೊಂದುವ ರಸ್ತೆಗಳ ಕಾಮಗಾರಿಗಳನ್ನು ಮಾರ್ಗ ಸೂಚಿಗಳಲ್ಲಿ ತಿಳಿಸಿದಂತೆ 8ನೇ ಪ್ರವರ್ಗದ ಕಾಮಗಾರಿಗಳಡಿ ಶೇಕಡ 25 ರ ಮಿತಿಯಲ್ಲಿ ಕಾರ್ಯಗತ ಮಾಡುವುದು.


 “ಕುರಿ ದೊಡ್ಡಿ, ದನದ ಕೊಟ್ಟೆಗೆ ಮತ್ತು ಕೋಳಿ ಸಾಕಾಣಿಕೆ ಕೇಂದ್ರ”


ಗ್ರಾಮೀಣ ಜನರು ಜೀವನೋಪಾಯಕ್ಕಾಗಿ ಕೃಷಿಯೇತರ ಕಸುಬುಗಳನ್ನು ಅವಲಂಬಿಸುರುತ್ತಾರೆ. ಜಾನುವಾರು ಸಾಕಾಣಿಕೆಯೊಂದಿಗೆ ಅವುಗಳ ಲಾಲನೆ ಪಾಲನೆಯಲ್ಲಿ ದಿನಗಳನ್ನು ಕಳೆಯುತ್ತಾರೆ. ಹಾಗಾಗಿ ಇವುಗಳ ಪಾಲನೆಯು ಸುಗಮವಾಗಿ ನಡೆದಲ್ಲಿ ಗ್ರಾಮೀಣ ಜನರ ಜೀವನೋಪಾಯಕ್ಕೆ ಒಂದು ಒಳ್ಳೆಯ ದಾರಿಯಾಗುವುದು. ಈ ಸದುದ್ದೇಶದ ಹಿನ್ನೆಲೆಯಲ್ಲಿ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮೀಣ ಜನರಿಗೆ ದನದ ಕೊಟ್ಟಿಗೆ, ಕುರಿ/ಮೇಕೆ ದೊಡ್ಡಿ ಹಾಗೂ ವೈಯಕ್ತಿಕ ಕೋಳಿ ಸಾಕಾಣಿಕೆ ಕೇಂದ್ರಗಳನ್ನು ನಿರ್ಮಿಸಲು  ಕಾಮಗಾರಿಗಳನ್ನು ಕೈಗೊಂಡಿದೆ.


 “ಮನೆಗೊಂದು ಶೌಚಾಲಯ”


ವೈಯಕ್ತಿಕ ಶೌಚಾಲಯ, ಅಂಗನವಾಡಿ ಮತ್ತು ಶಾಲೆಗಳ ಶೌಚಾಲಯ ನಿರ್ಮಾಣ ಹಾಗೂ ಘನ ಮತ್ತು ದ್ರವ ತಾಜ್ಯ ವಸ್ತುಗಳ ನಿರ್ವಾಣೆ, ಜನರಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸುವ ಮುಖಾಂತರ ಮತ್ತು ಈ ಮೂಲಕ ಬಯಲು ಮಲ ವಿಸರ್ಜನೆ ಮುಕ್ತ ರಾಜ್ಯವನ್ನಾಗಿ ನಿರ್ಮಿಸುವ ಉದ್ದೇಶದಿಂದ  ವೈಯಕ್ತಿಕ ಶೌಚಾಲಯ,ಸಮುದಾಯ ಶೌಚಾಲಯ, ಅಂಗನವಾಡಿ ಮತ್ತು ಶಾಲೆಗಳ ಶೌಚಾಲಯ ನಿರ್ಮಾಣ ಕಾರ್ಯವನ್ನು ನಿರ್ಮಲ ಭಾರತ ಅಭಿಯಾನ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಗಳನ್ನು ಒಗ್ಗೂಡಿಸಿ ಕಾರ್ಯಗತ ಗೊಳಿಸುತ್ತಿದೆ.

ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ರೂ.4500/- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಡಿಯಲ್ಲಿ , ನಿರ್ಮಲ ಭಾರತ ಅಭಿಯಾನದ ಅಡಿಯಲ್ಲಿ ರೂ.4700/- ಹಾಗೂ ಫಲಾನುಭವಿ ವಂತಿಕೆ ರೂ.800/- ಒಟ್ಟು ಘಟಕ ವೆಚ್ಚ ರೂ.10,000/- ಮಿತಿ ಇರುತ್ತದೆ.



ಸ್ಮಶಾನ ಅಭಿವೃದ್ಧಿ



ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಜನರ ಬದುಕನ್ನು ಬದಲಾಯಿಸುವ ಹಕ್ಕು ಆದಾರಿತ ಕಾಯಿದೆ ಬದ್ಧ ಯೋಜನೆಯಾಗಿದೆ. ಗ್ರಾಮೀಣ ಭಾಗದಲ್ಲಿ ಸ್ಮಶಾನ ಭೂಮಿಗಳಿಗೆ ಹಾಲಿ ಇರುವ ರುದ್ರ ಭೂಮಿಗಳು ಸಹ ಸೌಕರ್ಯ ಹಾಗೂ ಸೌಲಭ್ಯಗಳಿಂದ ವಂಚಿತವಾಗಿವೆ. ಶವ ಯಾತ್ರೆಗೂ ಅಗತ್ಯವಾದ ದಾರಿಯಿಲ್ಲದಿರುವುದು ಮತ್ತೊಂದು ಕೊರತೆ. ಇದರಿಂದಾಗಿ ಶವ ಸಂಸ್ಕಾರ ಕ್ರಿಯೆಗೂ ಅನಾನುಕೂಲ ಅಡಚಣೆಗಳು ಉಂಟಾಗಿವೆ. ಈ ನಿಟ್ಟಿನಲ್ಲಿ “ನಮ್ಮ ಹೊಲ ನಮ್ಮ ದಾರಿ” ಕಾರ್ಯಕ್ರಮದಡಿಯಲ್ಲಿ ಹೊಲಗಳಿಗೆ ಹೋಗುವ ದಾರಿಯಲ್ಲಿ ಇಂತಹ ರುದ್ರ ಭೂಮಿಗಳಿಗೂ  ದಾರಿ ನಿರ್ಮಿಸುವುದನ್ನು ಕೈಗೆತ್ತಿಕೊಳ್ಳಲಾಗುವುದು.

ಸುವರ್ಣ ಗ್ರಾಮೋದಯ ಯೋಜನೆಯ 5ನೇ ಹಂತದ ಅಡಿಯಲ್ಲಿ ಆಯ್ಕೆಯಾದ ಗ್ರಾಮಗಳಲ್ಲಿ ಶೇಕಡ 8ರಷ್ಟು ಅನುದಾನವನ್ನು ರುದ್ರ ಭೂಮಿ/ಸ್ಮಶಾನ ಅಭಿವೃದ್ಧಿ ಮಾಡಲು ನಿಗದಿಪಡಿಸಿರುತ್ತದೆ




ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಉದ್ಯೋಗಾವಕಾಶ ಕಲ್ಪಿಸುವ ವಿಶೇಷ ಯೋಜನೆ



ಗ್ರಾಮೀಣ ಪ್ರದೇಶದ ನಿರುದ್ಯೋಗಿ, ಅರೆ-ಉದ್ಯೋಗಿ ಯುವಕರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಬೇಕಾದರೆ ಅವರಲ್ಲಿರುವ ದುಡಿಮೆಯ ಸಾಮರ್ಥ್ಯಕ್ಕೆ ಪೂರಕವಾದ ಅವಕಾಶಗಳನ್ನು ಕಲ್ಪಿಸುವ ಅಗತ್ಯವಿದೆ. ಇಲ್ಲದೆ ಹೋದಲ್ಲಿ ಅಪಾರವಾದ ಮಾನವ ಸಂಪತ್ತು ಅಪವ್ಯಯ ಆಗುವುದರಲ್ಲಿ ಸಂದೇಹವಿಲ್ಲ. ಈ ಸಮಸ್ಯ ನಿವಾರಿಸುವಲ್ಲಿ ಗ್ರಾಮೀಣ ಯುವಜನರಿಗೆ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಒದಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.


ಯುವಜನರಲ್ಲಿನ ಆಸಕ್ತಿಗನುಗುಣವಾಗಿ ಕೆಳ ಕಂಡ ಪ್ರಮುಖ ಚಟುವಟಿಕೆಗಳನ್ನು ಕೃಷಿ, ಕೃಷಿ ಆಧಾರಿತ, ಕೃಷಿಯೇತರ, ಕೈಗಾರಿಕಾ ಮತ್ತು ವ್ಯಾಪಾರ / ಸೇವೆ ಗುರುತಿಸಲಾಗಿದ್ದು ಈ ಚಟುವಟಿಕೆಗಳಲ್ಲಿ ಹೆಚ್ಚಿನ ತರಬೇತಿ ನೀಡಲು ಕ್ರಮ ವಹಿಸುತ್ತಿದೆ.


ಸಣ್ಣ ವ್ಯಾಪಾರ


ಹೊಲಿಗೆ ತರಬೇತಿ


ಸಿದ್ದ ಉಡುಪು ವಿನ್ಯಾಸ ಮತ್ತು ತಯಾರಿಕೆ


ಭದ್ರತಾ ಸಿಬ್ಬಂದಿ ತರಬೇತಿ


ಶುಶ್ರೂಷಾ ತರಬೇತಿ


ಸ್ವಚ್ಛತಾ ತರಬೇತಿ


ಬೆಸುಗೆ


ಗಣಕಯಂತ್ರ ತರಬೇತಿ


ಮರಗೆಲಸ, ಕಟ್ಟಡ ನಿರ್ಮಾಣ ಹಾಗೂ ಗಾರೆ ಕೆಲಸ ಇತ್ಯಾದಿ


ಗೃಹೋಪಯೋಗಿ ವಸ್ತುಗಳ ದುರಸ್ತಿ


ವಿದ್ಯುತ್ ಹಾಗೂ ವಿದ್ಯುಚ್ಛಕ್ತಿ ಉಪಕರಣಗಳ ದುರಸ್ತಿ


ತೆಂಗಿನ ಮರ ಏರುವ ತರಬೇತಿ.




ನಮ್ಮ ಹಳ್ಳಿ ನಮ್ಮ ನೀರು



ಮಳೆ ಕಡಿಮೆ ಬೀಳುವ ಪ್ರದೇಶದ ತೆರೆದ ಬಾವಿಗಳಲ್ಲಿ ಹಾಗೂ ಕೊಳವೆಬಾವಿಯಿಂದ ಹೊರ ಬರುವ ನೀರಿನ ಪ್ರಮಾಣ ಕಡಿಮೆಯಾದಂತಹ ಗ್ರಾಮೀಣ ಪ್ರದೇಶದಲ್ಲಿ ಜಲಸಂಪನ್ಮೂಲ ಹೆಚ್ಚಿಸಲು, ಅಂತರ್ಜಲದ ಮಟ್ಟ ಹೆಚ್ಚಿಸಲು ಮತ್ತು ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಲಭ್ಯತೆಗೊಳಿಸಲು ಭೂಮೇಲ್ಭಾಗದಲ್ಲಿ ಹೆಚ್ಚುವರಿ ಲಭ್ಯವಾಗಬಹುದಾದ ಮಳೆಗಾಲದ ನೀರನ್ನು ಭೂಮಿಯ ಒಳಗಿನ ಜಲಾಗಾರಗಳಿಗೆ ನೀರನ್ನು ಹರಿಸಲು ಪ್ರಕ್ರಿಯೆಯಲ್ಲಿ ಅಂತರ್ಜಲ ಮಾಡಲು ಇಂಗು ಗುಂಡಿಗಳು ಅತ್ಯಂತ ಪರಿಣಾಮಕಾರಿಯಾಗಬಲ್ಲವು.


ನಮ್ಮ ಹಳ್ಳಿ – ನಮ್ಮ ನೀರು ಕಾರ್ಯಕ್ರಮಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಡಿಯಲ್ಲಿ ಅನುಷ್ಠಾನಗೊಳಿಸುವುದು.




ನಮ್ಮೂರ ಕೆರೆ




ನಮ್ಮೂರ ಕೆರೆ ಕಾರ್ಯಕ್ರಮವನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಇಲಾಖೆಯಲ್ಲಿ ಹಾಲಿ ಜಾರಿಯಲ್ಲಿರುವ ಇತರೆ ಯೋಜನೆಗಳು ಅನುದಾನದಡಿಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎರಡು ಕೆರೆಗಳನ್ನು ಆಯ್ಕೆ ಮಾಡಿಕೊಂಡು ಪುನಃಶ್ಚೇತನಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.


ಹಳ್ಳಿಗಾಡಿನ ಬದುಕಿನಲ್ಲಿ ಹಿಂದಿನಿಂದ ಹಾಸುಹೊಕ್ಕಾಗಿ ಬಂದಂತಹ ಕೆರೆಗಳನ್ನು ಹಾಗೂ ಕಟ್ಟೆ, ಗೋಕಟ್ಟೆ, ಕಲ್ಯಾಣಿಗಳನ್ನು ಸಂರಕ್ಷಿಸುವ ಧ್ಯೇಯವನ್ನು ಈ ಕಾರ್ಯಕ್ರಮವು ಒಳಗೊಂಡಿರುತ್ತದೆ.


ಆದ್ದರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಆದ್ಯತಾ ಕಾಮಗಾರಿಗಳ ಪ್ರವರ್ಗದಡಿಯಲ್ಲಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಸಣ್ಣ ಕೆರೆ, ಕುಂಟೆ, ಗೋಕಟ್ಟೆ, ಕಲ್ಯಾಣಿ ಮೊದಲಾದವುಗಳನ್ನು ಪುನಃಶ್ಚೇತನಗೊಳಿಸಲು ಈ ಯೋಜನೆಯ ಕಾರ್ಯಾಚರಣೆ ಮಾರ್ಗಸೂಚಿ 2013ರ ನಾಲ್ಕನೇ ಆವೃತ್ತಿ ಹಾಗೂ ಯೋಜನೆ ಕಾಯ್ದೆ ಪ್ರಕಾರ ಕೈಗೊಳ್ಳಬಹುದು.


ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ಜಿಲ್ಲಾ ಪಂಚಾಯ್ತಿ ಕೆರೆಗಳ ಅಭಿವೃದ್ಧಿ ಕಾರ್ಯಕ್ರಮ – ಲೆಕ್ಕ ಶೀರ್ಷಿಕೆ 4702- ವಿಶೇಷ ಅಭಿವೃದ್ಧಿ ಕಾರ್ಯಕ್ರಮ ಮತ್ತು ಕೆರೆಗಳ ಪುನರುಜ್ಜೀವನ ಕಾರ್ಯಕ್ರಮದಡಿಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಳ್ಳಲಾಗುವುದು.




ಗ್ರಾಮಾಂತರ ಪ್ರದೇಶಗಳಲ್ಲಿ ಆಟದ ಮೈದಾನ ನಿರ್ಮಿಸುವುದು.


 


ಗ್ರಾಮೀಣ ಪ್ರದೇಶಗಳಲ್ಲಿ ಆಟದ ಮೈದಾನಗಳನ್ನು ನಿರ್ಮಾಣ ಮಾಡುವುದರಿಂದ ಪಾರಂಪರಿಕವಾಗಿ ಬಂದಿರುವ ಕ್ರೀಡೆಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯಬಹುದಾಗಿರುತ್ತದೆ. ಅಲ್ಲದೆ ಯುವ ಜನರನ್ನು ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಅವರನ್ನು ಮಾನಸಿಕವಾಗಿ, ದೈಹಿಕವಾಗಿ, ಸದೃಢರನ್ನಾಗಿ ಹಾಗೂ ಆರೋಗ್ಯವಂತರನ್ನಾಗಿ ಮಾಡಬಹುದಾಗಿರುತ್ತದೆ.


 


ಕೇಂದ್ರ ಸರ್ಕಾರವು ಅನುಷ್ಠಾನಗೊಳಿಸುವ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಒಂದು ಪ್ರಮುಖವಾದ ಯೋಜನೆಯಾಗಿರುತ್ತದೆ. ಇದನ್ನು ಕಾಯಿದೆ ಅಡಿ ತಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 2006-07ನೇ ಸಾಲಿನಿಂದ ಈವರೆಗೂ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇದೇ ಯೋಜನೆಯ ಅಡಿಯಲ್ಲಿ ಆಟದ ಮೈದಾನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬಹುದಾಗಿದೆ.


 


ಪ್ರಸ್ತಾಪಿಸಿದ ಆಟದ ಮೈದಾನದ ಕಾಮಗಾರಿಗಳು ಗ್ರಾಮ ಸಭೆಯಿಂದ ಮತ್ತು ಗ್ರಾಮ ಪಂಚಾಯತಿಯಿಂದ ಅನುಮೋದನೆಯಾಬೇಕು. ಇಂತಹ ಕಾಮಗಾರಿಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗುರುತಿಸಲಾದ ವಾರ್ಷಿಕ ಕಾಮಗಾರಿಗಳಲ್ಲಿ ಒಂದು ಭಾಗವಾಗಿರುತ್ತದೆ.




ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಸ್ಥಾಪನೆ


 



ನೀರು ಅಮೂಲ್ಯ, ನೀರು ಜೀವನದಾಯಿನಿ, ನೀರು ಇದ್ದಲ್ಲಿ ನೈರ್ಮಲ್ಯ, ನೀರು ಇದ್ದಲ್ಲಿ ಆರೋಗ್ಯ, ನೀರೇ ಜೀವನ. ಅದರಲ್ಲಿಯೂ ಕುಡಿಯುವ ಶುದ್ಧ ನೀರು ಜೀವನದ ಆಧಾರ. ಇಂದು ನೀರು ಕಲುಷಿತವಾಗಿದೆ. ಅಶುದ್ಧ ನೀರಿನಿಂದ ಬರುವ ರೋಗಗಳಿಂದ ವ್ಯಕ್ತಿ ದೈಹಿಕವಾಗಿ, ಆರ್ಥಿಕವಾಗಿ, ಜರ್ಜರಿತನಾಗಿ ರಾಷ್ಟ್ರಕ್ಕೆ ದುಡಿಯುವ ದಿನಗಳು ವ್ಯರ್ಥವಾಗುತ್ತಿವೆ. ಇದು ತಪ್ಪಬೇಕು. ಶುದ್ಧ ಕುಡಿಯುವ ನೀರು ಶ್ರೀಸಾಮಾನ್ಯರ ಹಕ್ಕಾಗಬೇಕು. ಉಳ್ಳವರು ಕುಡಿಯುವ ನೀರಿನಷ್ಟೇ ಗುಣಮಟ್ಟದ ನೀರು ಸಾಮಾನ್ಯ ಜನರಿಗೆ ಲಭ್ಯವಾಗಬೇಕು. ಇದು ಸರ್ಕಾರದ ಬದ್ಧತೆ. ಅದಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು. ಹಂತ ಹಂತವಾಗಿ ಸೌಲಭ್ಯವನ್ನು ನಾಡಿನಾದ್ಯಂತ ವಿಸ್ತರಿಸಲಾಗುವುದು.


 


ಶುದ್ಧನೀರಿನ ಘಟಕಗಳನ್ನು ಸ್ಥಾಪಿಸಿ, ಶುದ್ಧ ನೀರು ಪೂರೈಸುವುದರಿಂದ ಅಶುದ್ಧ ನೀರಿನಿಂದಾಗಿ ಬರುವ ರೋಗಗಳನ್ನು ತಡೆಗಟ್ಟಿ ಜನರನ್ನು ಆರೋಗ್ಯವಂತರನ್ನಾಗಿ ಮಾಡಬಹುದಾಗಿದೆ. ಜನರಿಗೆ ಅವಶ್ಯಕವಾದ ಮೂಲಭೂತ ಬೇಡಿಕೆಯನ್ನು ಸರ್ಕಾರವು ಪೂರೈಸಬಹುದಾಗಿದೆ.


 


ಕುಡಿಯುವ ನೀರಿನ ಘಟಕಗಳನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮದಡಿಯಲ್ಲಿ (NRDWP) ವೆಚ್ಚ ಭರಿಸಿ ಅನುಷ್ಠಾನಗೊಳಿಸಲಾಗುವುದು.





ರಾಜೀವ್ ಗಾಂಧಿ ಚೈತನ್ಯ ಯೋಜನೆ



ಸ್ವಾಭಿಮಾನಿ ಕರ್ನಾಟಕವನ್ನು ನಿರ್ಮಿಸುವ ಉದ್ದೇಶದಿಂದ ಗ್ರಾಮೀಣ ಭಾಗದ ಯುವಕರಿಗಾಗಿ “ರಾಜೀವ್ ಗಾಂಧಿ ಚೈತನ್ಯ ಯೋಜನೆ”ಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಿಂದ ಪ್ರತಿ ವರ್ಷ 5 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಇವುಗಳಿಂದ ಕರ್ನಾಟಕದ ಯುವಕ ಯುವತಿಯರ ಕನಸುಗಳು ಸಾಕಾರಗೊಳ್ಳುತ್ತವೆ. ಕೃಷಿ, ಕೃಷಿಯೋತರ, ಕೈಗಾರಿಕೆ ಮತ್ತು ಕೌಶಲ್ಯಯುತವಾದ ಯಾವುದೇ ಉದ್ಯೋಗಗಳ ನಿರ್ಮಿತಿಗಾಗಿ ಯುವಜನರನ್ನು ತರಬೇತುಗೊಳಿಸಬಹುದಾಗಿದೆ. ತರಬೇತಿ ಪಡೆದವರಿಗೆ ಆರ್ಥಿಕ ಸೌಲಭ್ಯ ನೀಡುವುದರ ಮೂಲಕ ಸ್ವತಂತ್ರ ಜೀವನಕ್ಕೆ ಅಣಿಗೊಳಿಸುವಂತಹ ಕಾರ್ಯವನ್ನು ಈ ಯೋಜನೆಯಡಿ ಕೈಗೊಳ್ಳಲಾಗುತ್ತದೆ. ಇದುವರೆಗೂ ಯಾವುದೇ ಯೋಜನೆಯ ಲಾಭ ಪಡೆಯದವರು ಈ ಯೋಜನೆಯಲ್ಲಿ ಅವಕಾಶ ಪಡೆದು ನೆಮ್ಮದಿಯ ಬದುಕನ್ನು ಸಾಗಿಸಬಹುದಾಗಿದೆ.


 


ಮೊದಲನೆಯದಾಗಿ ಪಂಚಾಯತ್ ರಾಜ್ ವ್ಯವಸ್ಥೆಯ ಸಹಯೋಗದೊಂದಿಗೆ ಯಾವುದೇ ಸರ್ಕಾರಿ ಯೋಜನೆಗಳ ಪ್ರತಿಫಲ ಪಡೆಯದ ಗ್ರಾಮೀಣ ಯುವಜನರಿಗೆ ಲಾಭದಾಯಕ ಸ್ವ ಉದ್ಯೋಗದ ಅವಕಾಶ ಕಲ್ಪಿಸುವುದರ ಮುಖಾಂತರ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಜನರನ್ನು ಯಶಸ್ವಿ ಉದ್ಯಮಶೀಲರನ್ನಾಗಿಸಿ, ಅವರ ಸಾಹಸದ ಬದುಕು ಗ್ರಾಮದ ಇತರರಿಗೆ ಸ್ವ-ಉದ್ಯೋಗಿಗಳಾಗುವಂತೆ ಪ್ರೇರಣೆ ನೀಡುವುದು.


 

ಯುವಕ ಯುವತಿಯರಿಗೆ ವೃತ್ತಿ ಕೌಶಲ್ಯ ತರಬೇತಿಗಳನ್ನು ನೀಡಿ ವಿವಿಧ ಸಂಘ-ಸಂಸ್ಥೆಗಳಲ್ಲಿ, ಸರ್ಕಾರದಲ್ಲಿ ಹಾಗೂ ಖಾಸಗಿ ಕಂಪನಿಗಳಲ್ಲಿ ಇವರು ಉದ್ಯೋಗ / ನೌಕರಿ / ಕೆಲಸ ಪಡೆಯುವಲ್ಲಿ ಸಹಾಯ ಮಾಡುವುದು.


 


ಮಿಲಿಟರಿ, ಕೆ.ಎಸ್.ಆರ್.ಪಿ., ಸೆಕ್ಯರಿಟಿ ಗಾರ್ಡ್ ಇತ್ಯಾದಿ ರಕ್ಷಣಾ ಕಾರ್ಯಗಳಿಗಾಗಿ ಪೋಲೀಸ್ ತರಬೇತಿ ಸಂಸ್ಥೆಗಳ ಜೊತೆ ತೊಡಗಿಸಿ ಕೈಗಾರಿಕಾ ವಲಯಗಳಲ್ಲಿನ ರಕ್ಷಣಾ ಕಾರ್ಯಗಳ ಉದ್ಯೋಗ ಪಡೆಯುವಂತೆ ಮಾಡುವುದು.


 

ಬೇರೆ ಬೇರೆ ಕೈಗಾರಿಕೆ /ಸೇವಾ ಸಂಸ್ಥೆಗಳಿಗೆ ಉದ್ಯೋಗಾಸಕ್ತರನ್ನು ದೊರಕಿಸಲು ಸಮರ್ಥರಿರುವ ಸೇವಾ ಸಂಸ್ಥೆಗಳನ್ನು ಗುರುತಿಸಿ ಅವುಗಳ ಸೇವೆ ಪಡೆಯುವುದು.


 

ಗ್ರಾಮೀಣ ಯುವಜನರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವುದು.


ನಿರುದ್ಯೋಗಿ ಯುವಜನರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮಗಳೊಂದಿಗೆ ಜೋಡಿಸುವುದು.


 

ರಾಜೀವ್ ಗಾಂಧಿ ಚೈತನ್ಯ ಯೋಜನೆ ಇದೇ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಜನರಿಗಾಗಿ ಸ್ವ-ಉದ್ಯೋಗ ಹಾಗೂ ಕೌಶಲ್ಯ ತರಬೇತಿಗಳನ್ನು ನೀಡುವ ಮುಖಾಂತರ ಉದ್ಯೋಗ ಕಲ್ಪಿಸುವ ವಿಶೇಷ ಯೋಜನೆಯಾಗಿದೆ.


 

 


ರಾಜೀವ್ ಗಾಂಧಿ ಸೇವಾ ಕೇಂದ್ರ ಯೋಜನೆ



ಮೂಲಭೂತ ಭೌತಿಕ ಸೌಕರ್ಯಗಳ ಕೊರತೆಯಿಂದಾಗಿ ನಮ್ಮ ಗ್ರಾಮ ಪಂಚಾಯತ್ ಗಳು ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿ ಆಡಳಿತ ಘಟಕಗಳಾಗಲು ಸಾಧ್ಯವಾಗಿರುವುದಿಲ್ಲ. ಈ ಸತ್ಯವನ್ನು ಅರಿತುಕೊಂಡ ಸರ್ಕಾರವು ಗ್ರಾಮ ಪಂಚಾಯತಿಯ ಭೌತಿಕ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಇಚ್ಛೆಯಿಂದ “ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಸಂಕಲ್ಪ ಮಾಡಿದೆ.

ಪಂಚಾಯತಿ ಪ್ರತಿನಿಧಿಗಳು, ಸದಸ್ಯರು, ಶ್ರೀಸಾಮಾನ್ಯರು ಹಾಗೂ ಅಧಿಕಾರ ನೌಕರರೊಂದಿಗೆ ವಿವಿಧ ಯೋಜನೆಗಳ ಕುರಿತು ಚರ್ಚೆ, ವಿಚಾರ ವಿನಿಮಯದ ಮುಖಾಂತರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ಇತರೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜೀವ್ ಗಾಂಧಿ ಸೇವಾ ಕೇಂದ್ರಗಳು ಅನುವು ಮಾಡಿಕೊಡುತ್ತದೆ.

 

 

 

 

ಮಹಿಳಾ ಮತ್ತು ಮಕ್ಕಳ  ಅಭಿವೃದ್ಧಿ ಇಲಾಖೆ

ಮಕ್ಕಳ ಅಬಿವೃದ್ದಿ ಕಾರ್ಯಕ್ರಮಗಳು 

2001 ರ ಜನಗಣತಿಯ ಪ್ರಕಾರ ರಾಜ್ಯದ 52.734 ಮಿಲಿಯನ್ ಜನ ಸಂಖ್ಯೆಯಲ್ಲಿ 0 ಯಿಂದ 6ರ ವಯೋಮಿತಿಯೊಳಗಿನ ಮಕ್ಕಳ ಸಂಖ್ಯೆ ಒಟ್ಟು ಜನ ಸಂಖ್ಯೆಯ ಶೇಕಡ 12.94ರಷ್ಟು ಇರುತ್ತದೆ. ಖಮಕ್ಕಳಿಗೆ ಉತ್ತಮ ಭವಿಷ್ಯವೇ ಭಾರತದ ಭವಿಷ್ಯಖ ಎಂಬ  ದೂರದೃಷ್ಠಿಯ ಪ್ರಕಾರ, ಇಲಾಖೆಯ ನೀತಿ, ಯೋಜನೆಗಳು ಮತ್ತು ಕಾರ್ಯಕ್ರಮಗಳು ಮಕ್ಕಳ ಪರಿಪೂರ್ಣ ಅಬಿವೃದ್ಧಿಗಾಗಿ ಹೆಚ್ಚು ಒತ್ತು ನೀಡುತ್ತಿದ್ದು, ಇದು ಮಕ್ಕಳ ಹಕ್ಕುಗಳನ್ನು ರಕ್ಷಣೆಮಾಡಲು, ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು ಹಾಗು ಮಕ್ಕಳ ಪೋಷಣೆ ಮತ್ತು ಪಾಲನೆಯು ಸೇರಿರುತ್ತದೆ. 


 

ದಿನಾಂಕ10-5-02 ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ತನ್ನ 27 ನೇ ವಿಶೇಷ ಅದಿವೇಶನದಲ್ಲಿ ಆಳವಡಿಸಿದ ಘೋಷಣೆ

1.    ಮಕ್ಕಳಿಗೆ ಮೊದಲ ಆದ್ಯತೆ

2.    ಬಡತನ ನಿಮರ್ೂಲನ ಮಾಡಿ,ಮಕ್ಕಳನ್ನು ಆಸ್ತಿಯನ್ನಾಗಿ ತೊಡಗಿಸಿ

3.   ಯಾವುದೇ ಮಗುವನ್ನು ಹಿಂದೆ ಸರಿಯಲು ಬಿಡಬೇಡಿ

4.    ಪ್ರತಿ ಮಗುವಿನ ಆರೈಕೆ ಮಾಡಿ

5.   ಪ್ರತಿ ಮಗುವಿಗೆ ಶಿಕ್ಷಣ ಕೊಡಿ

6.    ಮಕ್ಕಳನ್ನು ಅಪಾಯ ಮತ್ತು  ಶೋಷಣೆಯಿಂದ  ರಕ್ಷಿಸಿ

7.    ಯುದ್ಧದಿಂದ ಮಕ್ಕಳನ್ನು ರಕ್ಷಿಸಿ

8.    ಎಚ್ಐವಿ/ ಏಯ್ಡ್ಸ್ ವಿರುದ್ಧ ಹೋರಾಡಿ

9.    ಮಕ್ಕಳು ಹೇಳುವುದನ್ನು ಕೇಳಿ ಮತ್ತು ಅವರ ಭಾಗವಹಿಸುವಿಕೆಯನ್ನು ಖಾತರಿಪಡಿಸಿಕೊಳ್ಳಿ

10.    ಭೂ ಮಂಡಲವನ್ನು ಮಕ್ಕಳಿಗಾಗಿ ರಕ್ಷಿಸಿ ಇಡಿ

1. ರಾಜ್ಯವಲಯ ಯೋಜನೆಗಳು

 

ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮಗಳು

  1. ಸ್ತ್ರೀಶಕ್ತಿ ಯೋಜನೆ
  2. ಸಾಂತ್ವನ
  3. ಕರ್ನಾಟಕ ಮಹಿಳಾ ಅಬಿವೃದ್ಧಿ ಯೋಜನೆ
  4. ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳು: (ನಿರ್ಮಾಣ ಅನುದಾನ)
  5. ಕಾನೂನು ಪದವಿ ಪಡೆದ ಮಹಿಳೆಯರಿಗೆ ಆರ್ಥಿಕ ನೆರವು
  6. ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ವಿಶೇಷ ಘಟಕ
  7. ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸುವ ಕಾಯ್ದೆ, 2005ರ ಅನುಷ್ಠಾನ
  8. ಕಾನೂನು ಸಾಕ್ಷರತಾ ಶಿಬಿರ
  9. ಕರ್ನಾಟಕ ವಿವಾಹ  ನೋಂದಣಿ ಕಾಯ್ದೆ, 1976ರ ಅನುಷ್ಠಾನ
  10. ಸ್ವಾಧಾರ- ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗಾಗಿ ಯೋಜನೆ
  11. ಮದ್ಯ ಮತ್ತು ಮಾದಕ ವಸ್ತುಗಳ ದುರುಪಯೋಗವನ್ನು ತಡೆಗಟ್ಟಲು ಸಹಾಯ
  12. ರಾಜ್ಯ ಸರ್ಕಾರದ ಉದ್ಯೋಗಸ್ಥ ಮಹಿಳೆಯರ ವಸತಿಗೃಹ ಯೋಜನೆ

 

ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು                               

Child Development | Related Resource | Faqs

ಬಾಲನ್ಯಾಯ ಕಾಯಿದೆ 2000 ಹಾಗೂ ತಿದ್ದುಪಡಿ 2006

ವೀಕ್ಷಣಾಲಯ

ಬಾಲ ಮಂದಿರಗಳು

ಅರ್ಹ ಸಂಸ್ಥೆಗಳು

ವಿಶೇಷ ಬಾಲ ಪೊಲೀಸ್ ಘಟಕಗಳ ಸ್ಥಾಪನೆ

ಬಾಲನ್ಯಾಯ ಅಧಿನಿಯಮದಡಿ ತರಬೇತಿ

ಸ್ವೀಕಾರ ಕೇಂದ್ರಗಳು

ರಾಜ್ಯ ಮಹಿಳಾ ನಿಲಯಗಳು

ಅನುಪಾಲನಾ ಸೇವೆಗಳು

Skill Development Programme

 

ಇತರೆ ಕಾರ್ಯಕ್ರಮಗಳು

Child Development | Related Resource | Faqs

ಮಕ್ಕಳ ಸಹಾಯವಾಣಿ ಸೇವೆ 
ದತ್ತು ಸ್ವೀಕಾರ
ಸ್ವದೇಶಿ ದತ್ತು ಕಾರ್ಯಕ್ರಮ ಪ್ರೋತ್ಸಾಹಿಸಲು ಸಂಸ್ಥಥರ್ಿಕ ಸಹಾಯ ಯೋಜನೆ (ಶಿಶು ಗೃಹ ಯೋಜನೆ)
ಕುಟುಂಬ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸಲು ಪ್ರಾಯೋಜಿತ ಕಾರ್ಯಕ್ರಮ 
ರಾಜ್ಯ ಮಕ್ಕಳ ರಕ್ಷಣಾ ಘಟಕ