ಆರೋಗ್ಯ ಸೇವೆ : ನಮ್ಮ ತಿಳುವಳಿಕೆ ಎಷ್ಟು ಸರಿ ?
ಡಾ || ಸುಶೀಲಾ
ಆರೋಗ್ಯ ಸೇವೆ ಎಂಬುದರ ಬಗೆಗೆ ಜನರಲ್ಲಿ ಬಹಳಷ್ಟು ತಪ್ಪು ಕಲ್ಪನೆಯನ್ನೇ ಹರಡಲಾಗಿದೆ. ಇದರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತುಸೇವೆಗಳನ್ನು ತೀರಾ ನಿರ್ಲಕ್ಷಿಸಲಾಗಿದೆ.ಆರೋಗ್ಯ ಸೇವೆ”
ಮತ್ತು ವೈದ್ಯಕೀಯ ಚಿಕಿತ್ಸೆ ಎರಡೂ ಒಂದೇ ಎನ್ನುವುದು ಜನಸಾಮಾನ್ಯರ ಮಾತ್ರವಲ್ಲವೈದ್ಯಕೀಯ ವೃತ್ತಿನಿರತರಲ್ಲೂ ಇರುವ ಭಾವನೆ. ಆದರೆ “ವೈದ್ಯಕೀಯ ಚಿಕಿತ್ಸೆ” ಎನ್ನುವುದು “ಆರೋಗ್ಯ ಸೇವೆಯ
ಒಂದು ಭಾಗವಾಗಿರುತ್ತದೆ.
ಜನರ ಆರೋಗ್ಯ ಮಟ್ಟದ ಸ್ಥಿತಿಗತಿಯ ಏರಿಳಿತದ ಮತ್ತು ಆರೋಗ್ಯಮಟ್ಟ ಉತ್ತಮವಾಗಿರುವಂತೆ ನಿಗಾ ವಹಿಸುವ ಆರೋಗ್ಯದ ಮಟ್ಟ ಕುಸಿದರೆ ಅದನ್ನುಸರಿಪಡಿಸುವ, ಆರೋಗ್ಯದ ಮಟ್ಟದಲ್ಲಿ ಇನ್ನೂ
ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುವ, ವ್ಯಕ್ತಿಗೆ ಕುಟುಂಬಕ್ಕೆ, ಸಮಾಜಕ್ಕೆ ಆರೋಗ್ಯ ಸಿಬ್ಬಂದಿಗಳಅಂದರೆ ವೈದ್ಯರು ಆರೋಗ್ಯ ಕಾರ್ಯಕರ್ತರ ಮೂಲಕ ಕೊಡುವ ಹಲವಾರು ಸೇವೆಗಳ
ಸಂಗಮವೇ ಆರೋಗ್ಯ ಸೇವೆ.
ಆರೋಗ್ಯ ಸೇವೆಯ ಕೆಲವು ಸೂತ್ರಗಳು
* ಈ ಸೇವೆಗಳು ಆಯಾಯ ವ್ಯಕ್ತಿ, ಸಮಾಜ, ಕಾಲ, ಪರಿಸರಕ್ಕೆ ಮತ್ತು ಜನರ ಅವಶ್ಯಕತೆಗೆ ಅನುಗುಣವಾಗಿ ಸೂಕ್ತವಾಗಿರಬೇಕು.
* ಆರೋಗ್ಯ ಸೇವೆಯ ಘಟಕಗಳಾದ ರೋಗ ತಡೆಗಟ್ಟುವ ರೋಗಗುಣಪಡಿಸುವ ಆರೋಗ್ಯ ಅಭಿವೃದ್ಧಿಪಡಿಸುವ ಸೇವೆಗಳ ಸಮ್ಮಿಶ್ರಣ ಆಗಿರಬೇಕು.
* ಈ ಸೇವೆಯ ಮಟ್ಟ ಅಗತ್ಯತೆಗೆ ಅನುಗುಣವಾಗಿರಬೇಕು.
* ಜನರಿಗೆ ಅಗತ್ಯ ಸಮಯದಲ್ಲಿ ಸುಲಭವಾಗಿ ದೊರೆಯುವಂತಿರಬೇಕು.
* ಇದು ಜನಸಾಮಾನ್ಯರಿಗೆ ಆರ್ಥಿಕವಾಗಿ ಕೈಗೆಟುಕುವಂತಿರಬೇಕು.
* ಈ ಸೇವೆಗಳಿಗೆ ಬೇಕಾದ ಸಿಬ್ಬಂದಿ, ಸಲಕರಣೆಯ ವ್ಯವಸ್ಥೆ ಸುಗಮವಾಗಿರಬೇಕು.
ಆರೋಗ್ಯ ಸೇವೆಯನ್ನು 3 ಹಂತಗಳಾಗಿ ವಿಭಜಿಸಬಹುದು.
1. ಪ್ರಾಥಮಿಕ ಹಂತದ ಆರೋಗ್ಯ ಸೇವೆ : ಈ ಹಂತದ ಆರೋಗ್ಯ ಸೇವೆಯ ಬಗ್ಗೆ ಜನಸಾಮಾನ್ಯರಲ್ಲಿ ಮಾತ್ರವಲ್ಲ, ವೈದ್ಯಕೀಯ ವೃತ್ತಿ ನಿರತರಲ್ಲೂಕೂಡಾ ತಪ್ಪು ಗ್ರಹಿಕೆ ಇದೆ.
ಪ್ರಾಥಮಿಕ ಆರೋಗ್ಯ ಸೇವೆ (ಪ್ರಾ.ಆ.ಸೇ) ಹಳ್ಳಿಗಾಡಿನ ಬಡಜನರಿಗಾಗಿ ಇರುವ ಕನಿಷ್ಟ ಪ್ರಮಾಣದ ವೈದ್ಯಕೀಯ ಚಿಕಿತ್ಸೆಒದಗಿಸುವ ಸೇವೆ ಎನ್ನುವುದು ಬಹುತೇಕ ಎಲ್ಲರ ಅಭಿಮತ.
ಆದ್ದರಿಂದ ಈ ಹಂತದ ಅಂದರೆ ಪ್ರಾ.ಆ.ಸೇ. ಯ ಅನುಷ್ಠಾನಕ್ಕೆ ಹೆಚ್ಚಿನ ವೈದ್ಯಕೀಯಪರಿಣತಿಯ ಅಗತ್ಯವಿಲ್ಲ….. ಇಲ್ಲಿ ದೊರೆಯುವ ಕೆಲವೇ ಮಾತ್ರೆ ಚುಚ್ಚುಮದ್ದುಗಳನ್ನು ಕೊಡಲು
ವೈದ್ಯರೇ ಬೇಕೆಂದೇನೂ ಇಲ್ಲ…… ಪೇಟೆ,ಪಟ್ಟಣಗಳಲ್ಲಿ ಇಂತಹ ಸೇವೆಯ ಸಂಸ್ಥೆಗಳ ಅಗತ್ಯತೆ ಇಲ್ಲ…. ಹಣವಂತರಿಗೆ, ವಿದ್ಯಾವಂತರಿಗೆ ಈ ಸೇವೆಯ ಅವಶ್ಯಕತೆ ಇಲ್ಲ…… ವೈದ್ಯಕೀಯ
ವೃತ್ತಿನಿರತರಲ್ಲಿ ಅತ್ಯಂತ ಕೆಳಮಟ್ಟದವರು ಇಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ…. ಎನ್ನುವುದು ಎಲ್ಲರ ನಂಬಿಕೆ.
ಹಾಗಾದರೆ
ಪ್ರಾಥಮಿಕ ಆರೋಗ್ಯ ಸೇವೆ ಎಂದರೇನು?
ಆರೋಗ್ಯ ಸೌಲತ್ತು ಮತ್ತು ಜನರ ನಡುವಿನ ಮೊತ್ತಮೊದಲ ಸಂಪರ್ಕವೇ ಪ್ರಾಥಮಿಕ ಆರೋಗ್ಯ ಸೇವೆ. ಅಂದರೆ ಬಡವನಿಂದ ಹಿಡಿದು ಬಲ್ಲಿದನತನಕಹಳ್ಳಿಗಾಡಿನಿಂದ ಹಿಡಿದು ಪೇಟೆ ಪಟ್ಟಣದತನಕ,
ಅವಿದ್ಯಾವಂತರಿಂದ ಹಿಡಿದು ವಿದ್ಯಾವಂತರವರೆಗೆ ಎಲ್ಲರಿಗೂ ಅಗತ್ಯವಾದ ಮೂಲಭೂತ ಆರೋಗ್ಯಸೌಲಭ್ಯ ತಲುಪಿಸಲು ಬೇಕಾದ ಸೇವೆ ಇದಾಗಿದೆ.
* ಸಾಮಾಜಿಕ ಸಮಾನತ
* ಇಡೀ ರಾಷ್ಟ್ರದ ಜನ ತಮ್ಮ ಚುನಾಯಿತ ಸರಕಾರಗಳ ಮೂಲಕ ಆರೋಗ್ಯ ಸೇವೆ ಸೌಲಭ್ಯಗಳ ಯೋಜನೆ ತಯಾರಿಕೆ ಮತ್ತು ಅದರ ಅನುಷ್ಟಾನದಲ್ಲಿಪಾಲ್ಗೊಳ್ಳುವಂತೆ ಕೊಡುವುದು.
ಈ ಮುಂತಾದ ತತ್ವಗಳ ತಳಹದಿಯ ಮೇಲೆ ಪ್ರಾಥಮಿಕ ಆರೋಗ್ಯ ಸೇವೆಯು ರಚಿಸಲ್ಪಟ್ಟಿದೆ.
ಪ್ರಾಥಮಿಕ ಆರೋಗ್ಯ ಸೇವೆಯ ಉದ್ದೇಶಗಳೇನು?
ರೋಗ ತಡೆಗಟ್ಟುವುದು, ರೋಗ ಬಂದರೆ ಅದು ವಿಕೋಪಕ್ಕೆ ತಿರುಗುವ ಮೊದಲೇ ಪತ್ತೆಹಚ್ಚಿ ಅದಕ್ಕೆ ಬೇಕಾದ ಚಿಕಿತ್ಸೆ ನೀಡುವುದು. ಜನರ ಆರೋಗ್ಯದಮಟ್ಟ ಇನ್ನೂ ಉತ್ತಮವಾಗುವಂತೆ
ಅಭಿವೃದ್ಧಿಪಡಿಸುವುದು.
ಈ ಉದ್ದೇಶಗಳನ್ನು ಈಡೇರಿಸುವುದು ಹೇಗೆ?
ಆರೋಗ್ಯ ಶಿಕ್ಷಣದಿಂದ :
ವ್ಯಕ್ತಿ : ಕುಟುಂಬದ ಸದಸ್ಯರು ಮತ್ತು ಸಮಾಜದ ಪ್ರಜೆಗಳಿಗೆ ಆರೋಗ್ಯ ಶಿಕ್ಷಣ ನೀಡುವುದರಿಂದ ಆರೋಗ್ಯ ಶಿಕ್ಷಣ ಆರೋಗ್ಯ ಸೇವೆಯ ಒಂದು ಪ್ರಮುಖಅಂಶ.ಜನರಿಗೆ ಸಮಾಜದಲ್ಲಿರುವ ಕಾಯಿಲೆಗಳು
ಯಾವುದು. ಈ ಕಾಯಿಲೆಗೆ ತುತ್ತಾಗುವ ಬಗೆ ಹೇಗೆ, ಇದನ್ನು ಬಾರದಂತೆ ತಡೆಗಟ್ಟಲುತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳೇನು, ಸಾಂಕ್ರಾಮಿಕ ಕಾಯಿಲೆ ಬಂದರೆ ಅದು ಬೇರೆಯವರಿಗೆ ಹರಡದಂತೆ
ತಡೆಗಟ್ಟುವುದು ಹೇಗೆ? ಕಾಯಿಲೆಬಂದರೆ ಆರಂಭದಲ್ಲೇ ಪತ್ತೆಹಚ್ಚಿ ಕ್ರಮಬದ್ಧವಾದ, ಸಂಪೂರ್ಣ ಚಿಕಿತ್ಸೆ ಪಡೆಯುವ ಅಗತ್ಯ ಏನು? ಈ ಎಲ್ಲಾ ಸೌಲಭ್ಯ ಎಲ್ಲಿ ಪಡೆಯಬಹುದು ಎನ್ನುವುದರಬಗ್ಗೆ ತಿಳುವಳಿಕೆ
ನೀಡುವುದು.
ಆರೋಗ್ಯ ಕಾಪಾಡಲು, ಅದು ಇನ್ನೂ ಉತ್ತಮವಾಗಲು ಸಮತೂಕದ ಆಹಾರ ಪೌಷ್ಟಿಕಾಂಶಗಳ ಉಪಯೋಗ, ಶುಚಿತ್ವ ಕಾಪಾಡುವಿಕೆಯಅಗತ್ಯತೆಗಳನ್ನು ಮನದಟ್ಟು ಮಾಡುವುದು ಮುಂತಾದ
ಕಾರ್ಯಕ್ರಮಗಳು ಹಾಗೂ ಆರೋಗ್ಯ ಶಿಕ್ಷಣದ ಮೂಲಕ ಸಾಧ್ಯ.ಜನರಲ್ಲಿ ಯಾವುದೇ ಕಾಯಿಲೆಕಾಣಿಸಿಕೊಂಡರೆ ಅದನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ಅದಕ್ಕೆ ಬೇಕಾದ ಸಂಪೂರ್ಣ ಚಿಕಿತ್ಸೆ ನೀಡುವುದು.
ಕಾಯಿಲೆ ಪತ್ತೆಹಚ್ಚಲು ಮತ್ತು ಅದರಚಿಕಿತ್ಸೆಗೆ ಬೇಕಾದ ಸಲಕರಣೆ ಮತ್ತು ಔಷಧಿಗಳ ಶೇಖರಣೆ.ರೋಗ ನಿರೋಧಕ ಲಸಿಕೆ, ಚುಚ್ಚುಮದ್ದನ್ನು ಅದರ ಅವಶ್ಯಕತೆ ಇರುವ ಜನರಿಗೆನೀಡುವುದು.ಮಕ್ಕಳಿಗೆ,
ಗರ್ಭಿಣಿ ಸ್ತ್ರೀಯರಿಗೆ ಮತ್ತು ಎದೆಹಾಲುಣಿಸುವ ತಾಯಂದಿರಿಗೆ ಪೌಷ್ಟಿಕ ಆಹಾರದ ಪೂರೈಕೆ.ತಾಯಿ ಮಕ್ಕಳ ಆರೋಗ್ಯ ಸೇವೆಮತ್ತು ಕುಟುಂಬ ಕಲ್ಯಾಣ ಯೋಜನೆಯ ಅನುಷ್ಟಾನ.ಅವಶ್ಯಕತೆಗೆ ತಕ್ಕಂತೆ
ಬೇಕಾದಷ್ಟು ಸ್ವಚ್ಛ ನೀರಿನ ಸರಬರಾಜು ಮತ್ತು ಸಾರ್ವಜನಿಕ ಶುಚಿತ್ವದಬಗ್ಗೆ ಗಮನ ಕೊಡುವುದು.ರಾಷ್ಟ್ರೀಯ ಆರೋಗ್ಯ ಯೋಜನೆ (…………………)ಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಯಿಲೆಗಳ
ಹತೋಟಿನಿರ್ಮಾಲನದ ಅನುಷ್ಟಾನ. ಆಯಾಯ ಸ್ಥಳ ಕಾಲ ಪರಿಸ್ಥಿತಿಗೆ ಅನುಗುಣವಾಗಿ ಮೇಲೆ ಹೇಳಿದ ಪಟ್ಟಿಯನ್ನು ಪರಿಷ್ಕರಿಸಬಹುದು. ಉದಾ :ವಯಸ್ಸಾದವರ ಸೇವೆ, ಮಾನಸಿಕ ಆರೋಗ್ಯ,
ಅಂಗವಿಕಲರ ಸೇವೆ ಮುಂತಾದ ಕಾರ್ಯಗಳನ್ನು ಪಟ್ಟಿಯಲ್ಲಿ ಸೇರಿಸಬಹುದು.
ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಕಾರ್ಯನಿರತ ವೈದ್ಯರು ಮತ್ತು ಸಿಬ್ಬಂದಿ ರೋಗ ತಡೆಗಟ್ಟುವ ವಿಧಾನ ಮತ್ತು ಸಮಾಜದಲ್ಲಿ ಅದರ ಅನುಷ್ಟಾನದಬಗ್ಗೆ ಸರಿಯಾದ ತಿಳುವಳಿಕೆ
ಇರುವವರಾಗಿರಬೇಕು. ಕಾಯಿಲೆಯ ಆರಂಭಿಕ ಗುಣಲಕ್ಷಣಗಳಿಂದ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಭ್ಯವಿರುವಸುಲಭ, ಸರಳ, ಅಗ್ಗದ, ರೋಗಿಗೆ ಹೆಚ್ಚಿನ ತೊಂದರೆ ಉಂಟು ಮಾಡದ
ಪರೀಕ್ಷೆಗಳಿಂದ ಕಾಯಿಲೆಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚುವನಿಪುಣತೆ ಇರುವವರಾಗಿರಬೇಕು. ಹೀಗೆ ಪತ್ತೆಹಚ್ಚಿದ ಕಾಯಿಲೆಯನ್ನು ತಕ್ಕ ಔಷಧ ಮತ್ತು ಸರಳ ಚಿಕಿತ್ಸಾ ವಿಧಾನಗಳಿಂದ
ಗುಣಪಡಿಸುವ.ಗುಣಪಡಿಸಲಾಗದ ಕಾಯಿಲೆಯನ್ನು ಹತೋಟಿಯಲ್ಲಿಡುವ, ಸಾಂಕ್ರಾಮಿಕ ಕಾಯಿಲೆ ಇದ್ದರೆ ಅದು ಸಮಾಜದಲ್ಲಿ ಹರಡದಂತೆ ನೋಡಿಕೊಳ್ಳುವಲ್ಲಿಪರಿಣತರಾಗಿರಬೇಕು. ಇವರಿಗೆ
ದೇಹದ ಯಾವುದೇ ಒಂದು ಅಂಗದ ಬಗ್ಗೆ ಅದಕ್ಕೆ ಬಂದ ಕಾಯಿಲೆಯ ಬಗ್ಗೆ ಮಾತ್ರ ಉಚ್ಚಮಟ್ಟದ ಅರಿವು ಇದ್ದರೆಸಾಲದು. ಬದಲು ವ್ಯಕ್ತಿಯ ದೈಹಿಕ, ಮಾನಸಿಕ ಸ್ಥಿತಿ ಮತ್ತು ಅವನಿರುವ ಸಮಾಜದ,
ಆರ್ಥಿಕ, ಸಾಂಸ್ಕೃತಿಕ, ಪ್ರಾಕೃತಿಕ ಮತ್ತು ಭೌಗೋಳಿಕಸ್ವರೂಪದ ತಿಳುವಳಿಕೆ ಮತ್ತು ಇವುಗಳ ಬಗ್ಗೆ ಕಾಳಜಿ ಕಳಕಳಿ ಇರುವುದು ಅಗತ್ಯ.
ಯಾವ ಸಮಾಜದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯ ಮೂಲಕ ಈ ರೀತಿಯ ಸೇವೆ ಸಿಗುವುದಿಲ್ಲವೋ ಅಲ್ಲಿ ರೋಗ ತಡೆಗಟ್ಟುವ ಕಾರ್ಯಕ್ರಮದಕೊರತೆಯಿಂದ ಸಮಾಜದಲ್ಲಿ ರೋಗಗಳ,
ರೋಗಿಗಳ ಸಂಖ್ಯೆ ಹೆಚ್ಚುವುದು. ಪ್ರಾಥಮಿಕ ಹಂತದಲ್ಲಿ ರೋಗ ಪತ್ತೆಹಚ್ಚಿ ಚಿಕಿತ್ಸೆ ಕೊಡುವ ಕಾರ್ಯಕ್ರಮದಕೊರತೆಯಿಂದ ಈ ರೋಗಿಗಳಲ್ಲಿ ರೋಗ ಉಲ್ಬಣಗೊಳ್ಳುವುದು. ಇನ್ನು ಈ ಉಲ್ಬಣಗೊಂಡ
ಕಾಯಿಲೆಯ ಉಲ್ಬಣತೆ ಪತ್ತೆಹಚ್ಚಲು, ಚಿಕಿತ್ಸೆ ನೀಡಲುದುಬಾರಿ, ಕ್ಲಿಷ್ಟ ಮತ್ತು ಕೆಲವೊಮ್ಮೆ ರೋಗಿಗೆ ದೈಹಿಕವಾಗಿ, ಮಾನಸಿಕವಾಗಿ ತ್ರಾಸದಾಯಕವಾದ ತೊಂದರೆ ಉಂಟುಮಾಡಬಹುದಾದ
ಪರೀಕ್ಷೆ ಮತ್ತುಚಿಕಿತ್ಸೆಗೆ ಒಳಪಡಿಸಬೇಕಾಗಬಹುದು. ಕಾಯಿಲೆ ಉಲ್ಬಣಗೊಂಡಂತೆ ಅದನ್ನು ಗುಣಪಡಿಸುವುದೂ ಹತೋಟಿಗೆ ತರುವುದು ಕೆಲವೊಮ್ಮೆಕಷ್ಟವಾಗಿರುತ್ತದೆ. ಇಂತಹ ಸಂದರ್ಭದಲ್ಲಿ
ಈ ಎಲ್ಲಾ ಪರೀಕ್ಷೆ ಮತ್ತು ಚಿಕಿತ್ಸೆಗೆ ಸೌಲಭ್ಯ ಇರುವ ದ್ವಿತೀಯ, ಅದಕ್ಕೂ ಮಿಗಿಲಾಗಿ ತೃತೀಯ ಹಂತದವೈದ್ಯಕೀಯ ಸೇವೆಯ ಅಗತ್ಯ ಹೆಚ್ಚುವುದು. ಅಂದರೆ ಪ್ರಾಥಮಿಕ ಆರೋಗ್ಯ ಸೇವೆಯ
ಕೊರತೆಯಿಂದ ಜನರ ಆರೋಗ್ಯ ಮಟ್ಟ ಆರ್ಥಿಕ, ಸಾಮಾಜಿಕಉತ್ಪಾದನೆಯ ಮಟ್ಟ, ಇದೆಲ್ಲದರ ಪರಿಣಾಮವಾಗಿ ಜೀವನಮಟ್ಟ ಕುಸಿಯುವುದು.
2. ಮಧ್ಯಮ ಹಂತದ ಆರೋಗ್ಯ ಸೇವೆ :
ಪ್ರಾಥಮಿಕ ಆರೋಗ್ಯ ಸೇವೆ ಉತ್ತಮವಾಗಿದ್ದಾಗಲೂ ಹಲವಾರು ಕಾರಣಗಳಿಂದ ಕಾಯಿಲೆ ವಿಕೋಪಕ್ಕೆ ಹೋದರೆ ಅಥವಾ ಕಾಯಿಲೆಗೆ ಪ್ರಾಥಮಿಕಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಸಾಧ್ಯವಾಗದಿದ್ದರೆ
ಈ ಕಾಯಿಲೆಗಳ ಚಿಕಿತ್ಸೆಗೆ ಇರುವ ಸೇವೆಯೇ ದ್ವಿತೀಯ ಹಂತದ ಆರೋಗ್ಯ ಸೇವೆ. ಇಲ್ಲದ ಆದ್ಯತೆರೋಗ ಚಿಕಿತ್ಸೆಗೆ ವಿಹನ ರೋಗ ತಡೆಗಟ್ಟುವ ಆರೋಗ್ಯ ವೃದ್ಧಿಪಡಿಸುವ ಕಾರ್ಯಗಳಿಗಲ್ಲ.
3. ತೃತೀಯ ಹಂತದ ಸೇವೆ
ಕಾರಣಾಂತರದಿಂದ ಕಾಯಿಲೆ ದ್ವಿತೀಯ ಹಂತದ ಚಿಕಿತ್ಸೆಯಿಂದ ಗುಣವಾಗದಿದ್ದರೆ ಇನ್ನೂ ಹೆಚ್ಚಿನ ರೋಗ ಪತ್ತೆಹಚ್ಚುವ ಪರೀಕ್ಷೆ ಮತ್ತು ಚಿಕಿತ್ಸೆಗೆ ಇರುವಸೇವೆಯೇ ತೃತೀಯ ಹಂತದ ಸೇವೆ.
ಇದು ಚಿಕಿತ್ಸೆಗೆ ಆದ್ಯತೆ ಕೊಡುವ ಮತ್ತು ಬಹಳ ದುಬಾರಿ ಸೇವೆಯಾಗಿರುತ್ತದೆ.
ಪ್ರಾಥಮಿಕ ಆರೋಗ್ಯ ಸೇವೆಯ ಕೊರತೆ ಇದ್ದಾಗ ದ್ವಿತೀಯ ಅದರಲ್ಲೂ ತೃತೀಯ ಹಂತದ ಸೇವೆಯ ಅವಶ್ಯಕತೆ ಜಾಸ್ತಿಯಾಗುತ್ತದೆ.